ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಭಾರತೀಯ

ಲುಫ್ತಾನ್ಸಾಗೆ ಏರಲು ಸ್ವಾಗತ, ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಭಾರತೀಯ ವಿಮಾನಯಾನ! ಎಲ್ಲಾ ಲುಫ್ತಾನ್ಸಾ ವಿಮಾನಗಳಲ್ಲಿ ಭಾರತದೊಳಗೆ ಮತ್ತು ಹೊರಗೆ ಸಂಪೂರ್ಣ ವಿಶಿಷ್ಟವಾದ ಭಾರತದ ಸ್ಫೂರ್ತಿ. ಭಾರತಕ್ಕೆ ಅರ್ಧ ಶತಮಾನಕ್ಕೂ ಹೆಚ್ಚಿನ ಸೇವೆಯ ನಂತರ, ಅದು ನಮ್ಮ ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ನಾವೀನ್ಯತೆ ಮತ್ತು ತಂತ್ರಜ್ಞಾನದ ಅತ್ಯುತ್ತಮತೆಯ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ.

ಪ್ರಯಾಣದ ಪ್ರತಿಯೊಂದು ಹಂತದಲ್ಲೂ ನೀವು ಭಾರತದ ಸ್ಪರ್ಶವನ್ನು ಕಾಣಬಹುದು- ಅದು ಆತಿಥ್ಯವೇ ಇರಲಿ, ವಿಮಾನದೊಳಗಿನ ಆಹಾರ ಅಥವಾ ಮನರಂಜನೆಯಾಗಲಿ. ನಮ್ಮ ದೀರ್ಘಾವಧಿ ಪಾಲುದಾರಿಕೆ ಭಾರತೀಯ ಸಂಸ್ಕೃತಿಯನ್ನು ನಾವು ಪ್ರಶಂಸಿಸಲು ಮತ್ತು ನಮ್ಮ ಉತ್ಪನ್ನಗಳನ್ನು ನಿಮ್ಮ ಬಯಕೆಗೆ ಅನುಗುಣವಾಗಿ ವ್ಯವಸ್ಥಿತಗೊಳಿಸಲು ನೆರವಾಗಿದೆ. ಈ ಅವಿರತ ಪ್ರಯತ್ನ ನಿಮ್ಮ ವಿಶ್ವಾಸವನ್ನು ಗಳಿಸಲು ನೆರವಾಗಿ, ನಮ್ಮನ್ನು ಭಾರತದಲ್ಲಿ ನಂ 1 ಯೂರೋಪಿಯನ್ ಏರ್ ಲೈನ್ ಆಗಿ ಮಾಡಿದೆ.

View More

ವಿಮಾನದಲ್ಲಿ: ಆಕಾಶದಲ್ಲಿ ಭಾರತದ ಸ್ಪರ್ಶ

Onboard

ಮನರಂಜನೆಯಿರಲಿ, ಆಹಾರ ಅಥವಾ ಸಿಬ್ಬಂದಿಯಿರಲಿ, ಲುಫ್ತಾನ್ಸ್ ವಿಮಾನಯಾನದ ಸಂಪೂರ್ಣ ಅನುಭವ ಮನೆಯಿಂದ ದೂರವಾದ ಮನೆ ಯ ಅನುಭವವನ್ನು ನೀಡುತ್ತದೆ.

ಪ್ರಯಾಣ ಆರಂಭವಾದ ಕ್ಷಣದಿಂದ ಗುರಿ ತಲುಪುವ ಮಾರ್ಗದವರೆಗೆ, ಭಾರತದಿಂದ ಬಂದ ಲುಫ್ತಾನ್ಸಾ ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಸಿದ್ಧವಾಗಿರುವ ಪ್ರಪಂಚಕ್ಕೆ ಕಾಲಿರಿಸುತ್ತಾರೆ. ಓದಲು ಅನೇಕ ವಿಧದ ಭಾರತೀಯ ನ್ಯೂಸ್ ಪೇಪರ್ ಗಳು ಮತ್ತು ಮ್ಯಾಗಜೀನ್ ಗಳು, ಕೆಲವು ನಿರ್ದಿಷ್ಟ ರೇಡಿಯೋ ವಾಹಿನಿಗಳಲ್ಲಿ ಹಿಂದಿ ಚಲನಚಿತ್ರ ಗೀತೆಗಳನ್ನು ಕೇಳಬಹುದು, ಆನಂದಿಸಲು ಜನಪ್ರಿಯ ಬಾಲಿವುಡ್ ಚಲನಚಿತ್ರಗಳು, ಭಾರತೀಯ ಅಡಿಗೆ ಮತ್ತು ಸೇವೆ ನೀಡಲು ಬಿಸಿಬಿಸಿ ಚಹಾ ಸಹ ದೊರೆಯುತ್ತದೆ. ಇವೆಲ್ಲವೂ ಒಟ್ಟಾಗಿ ಸೇರಿ ಆಕಾಶದಲ್ಲಿ ಭಾರತದ ಸ್ಪರ್ಶ ನೀಡುತ್ತದೆ.

ಚೆಕ್-ಇನ್ ನಲ್ಲಿನ ಶುಭಾಶಯ ಕೋರುವ ಸಂಪರ್ಕದ ಮೊದಲ ಬಿಂದುವಿನಿಂದ ಅನುಭವೀ ಭಾರತೀಯ ಗ್ರೌಂಡ್ ಸಿಬ್ಬಂದಿ ಭಾರತೀಯ ಸಿಬ್ಬಂದಿ ಸದಸ್ಯರಿಗೆ ವಿಮಾನದೊಳಗೆ ಕಾಳಜಿ ವಹಿಸುವವರೆಗೆ, ಸಂಪೂರ್ಣ ವಿಮಾನಯಾನದ ಅನುಭವ ಮನೆಯಿಂದ ದೂರವಾದ ಮನೆಯನ್ನು ಸೃಷ್ಟಿಸುತ್ತದೆ.

View More

Inflight menu image

ವಿಮಾನದೊಳಗಿನ ಆಹಾರಪಟ್ಟಿ: ದೇಶೀ ರುಚಿ, ದೇಶೀ ಮಸಾಲೆಗಳು

ನಮ್ಮ ಮೊದಲ ಹಾಗೂ ಬಿಸಿನೆಸ್ ವರ್ಗದ ಪ್ರಯಾಣಿಕರನ್ನು ಅನುನಯಿಸಲು, ಭಾರತದಿಂದ ಮತ್ತು ಭಾರತಕ್ಕೆ ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಸುವವರಿಗೆ ಶೆಫ್ ಕುನಾಲ್ ಕಪೂರ್ ಹಾಗೂ ಬಹುದೊಡ್ಡ ಶೆಫ್ ಆದ ಸುರೇಂದರ್ ಮೋಹನ್ ತಮ್ಮ ತಂಡದೊಂದಿಗೆ ಅವರ ಕೈಯಿಂದ ತಯಾರಿಸಿದ ಅತ್ಯದ್ಭುತವಾದ ಭಾರತೀಯ ಅಡಿಗೆಯನ್ನು ನೀಡುತ್ತಾರೆ. ವಾಸ್ತವದಲ್ಲಿ, ಲುಫ್ತಾನ್ಸಾ ಅತ್ಯುತ್ತಮ ಭಾರತೀಯ ಪ್ರವೇಶಕ್ಕಾಗಿ ಭಾರತದಲ್ಲಿ ದೇಶಾದ್ಯಂತ ಅಡಿಗೆ ಸ್ಪರ್ಧೆಯನ್ನು ನಡೆಸಿ, ವಿಜೇತ ಅಡಿಗೆಯನ್ನು ತನ್ನ ಮೊದಲ ಮತ್ತು ಬಿಸಿನೆಸ್ ವರ್ಗದ ಪ್ರಯಾಣಿಕರ ಆಹಾರಪಟ್ಟಿಗೆ ಸೇರಿಸುತ್ತದೆ!

Inflight entertainment image

ವಿಮಾನದೊಳಗಿನ ಮನರಂಜನೆ: ನನಗಾಗಿ ಬಾಲಿವುಡ್

ಭಾರತದ ನಿರ್ದಿಷ್ಟ ಮ್ಯೂಸಿಕ್ ಚಾನಲ್ ನಲ್ಲಿ ಗೋಲ್ಡನ್ ಮೊಮೆಂಟ್ಸ್ ಅಥವಾ ಇತ್ತೀಚಿನ ಬಾಲಿವುಡ್ ಹಿಟ್ಸ್, ನಿಮಗಿಷ್ಟವಾದ ಸಂಗೀತವನ್ನು ಲುಫ್ತಾನ್ಸಾದ ಪ್ರಯಾಣಿಕರು ವಿಮಾನದೊಳಗೆ ಆನಂದಿಸಬಹುದಾಗಿದೆ. ನಿಮ್ಮ ಹೆಡ್ ಫೋನ್ ಕಿವಿಗೆ ಸೇರಿಸಿ ನೀವು ಊಹಿಸುವುದಕ್ಕಿಂತ ಹೆಚ್ಚು ವಿಮಾನದೊಳಗೆ ಭಾರತೀಯ ಅನುಭವವನ್ನು ಪಡೆಯಲು ವಿರಮಿಸಿ! ನೀವು ಭಾರತೀಯ ನ್ಯೂಸ್ ಪೇಪರ್ ಅಥವಾ ಮ್ಯಾಗಜೀನ್ ನಿಂದ ಇತ್ತೀಚಿನ ಸುದ್ದಿಗಳನ್ನೂ ಪಡೆಯಬಹುದಾಗಿದೆ!

ಹಾಗೂ ಒಮ್ಮೆ ನೀವು ಮೋಡದ ಮೇಲೆ ತೇಲುವಾಗ, ಬಾಲಿವುಡ್ ಚಿತ್ರಗಳ ಸರಣಿ ಮತ್ತು ಭಾರತೀಯ ಟಿವಿ ಶೋಗಳನ್ನು ನಿಮ್ಮ ಅಂತ್ಯವಿಲ್ಲದ ವಿಮಾನದೊಳಗಿನ ಮನರಂಜನಾ ಕಾರ್ಯಕ್ರಮದಲ್ಲಿ ಆಯ್ಕೆಮಾಡಿ. ನೀವು ಲುಫ್ತಾನ್ಸಾದಲ್ಲಿ ಹಾರುವಾಗ, ಹಿಂದಕ್ಕ್ ಕುಳಿತು, ವಿರಮಿಸಿ, ಆಕಾಶದಲ್ಲಿ ಕೆಲವು ದೇಶೀ ಮನರಂಜನೆಯನ್ನು ಆನಂದಿಸುವ ಸಮಯವಾಗಿರುತ್ತದೆ.

ನಿಮಗೆ ಗೊತ್ತೇ?

1987 ರಿಂದ 30 ಕ್ಕೂ ಹೆಚ್ಚು ವರ್ಷಗಳಿಂದ ಲುಫ್ತಾನ್ಸಾ ವಿಮಾನಗಳಲ್ಲಿ ಭಾರತೀಯ ಸಂಗೀತವನ್ನು ಪರಿಚಯಿಸಲಾಗಿದೆ.

View More

Indian crew

ಭಾರತೀಯ ಸಿಬ್ಬಂದಿ: ಮನೆಯ ಸ್ಪರ್ಶ

ಭಾರತೀಯರು ವಿಶ್ವಾದ್ಯಂತ ತಮ್ಮ ಆತಿಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರಣದಿಂದ ಲುಫ್ತಾನ್ಸಾ ಸುಮಾರು 200 ವಿಮಾನ ಸಿಬ್ಬಂದಿ ನೌಕರರನ್ನು ನೇಮಿಸಿದೆ. ನೀವು ಒಮ್ಮೆ ವಿಮಾನನಿಲ್ದಾಣದಲ್ಲಿ ಚೆಕ್ ಇನ್ ಆದ ನಂತರ, ನಮ್ಮ ನೆರವು ನೀಡುವ ಹಾಗೂ ತರಬೇತಿ ಪಡೆದ ತಳ ಸಿಬ್ಬಂದಿಯಾದ, ನಮ್ಮ ಭಾರತೀಯ ಸಿಬ್ಬಂದಿ ನಿಮಗೆ ನಿಮ್ಮ ವಿಮಾನದಲ್ಲಿ ಮನೆಯಲ್ಲಿರುವ ಅನುಭವ ನೀಡಲು ನೆರವಾಗುತ್ತಾರೆ.

ಆಗಮನದ ನಂತರ, ಲುಫ್ತಾನ್ಸಾ ವೆಲ್ ಕಂ ಸೇವೆಯು ಫ್ರಾಂಕ್ ಫರ್ಟ್ ನಂತಹ ನಮ್ಮ ಕೇಂದ್ರಗಳಲ್ಲಿ ನಿಮ್ಮನ್ನು ಹಿಂದಿ, ತಮಿಳು ಮತ್ತು ಪಂಜಾಬಿ ಭಾಷೆಗಳಲ್ಲಿ ಶುಭಾಶಯ ಕೋರಲು ಲಭ್ಯವಿರುತ್ತಾರೆ. ಜರ್ಮನ್ ಅಥವಾ ಇಂಗ್ಲೀಷ್ ಭಾಷೆಗಳನ್ನು ಮಾತನಾಡಲು ಬಾರದ ಅತಿಥಿಗಳಿಗೆ ನೆರವಾಗುವ ಉದ್ದೇಶದಿಂದ, ವಿಮಾನ ನಿಲ್ದಾಣದಲ್ಲಿ ನಿಮ್ಮ ಆಗಮನ ಅಥವಾ ನಿರ್ಗಮನವನ್ನು ಸರಳೀಕರಿಸುವ ಸೇವೆ ನೀಡುತ್ತದೆ.

View More

ಲುಫ್ತಾನ್ಸಾ ಮತ್ತು ಭಾರತ

Lufthansa India

JU52 ವಿಮಾನ ಜೋಧಪುರದ ಸುಂದರ ನಗರದಲ್ಲಿ ಇಳಿಯುವ ಮೂಲಕ ಮೊದಲ ಲುಫ್ತಾನ್ಸಾ ಏರ್ ಕ್ರಾಫ್ಟ್ ಭಾರತೀಯ ಮಣ್ಣಿನಲ್ಲಿ 1934 ರಂದು ಆಗಮಿಸಿತು. ಆದರೆ 1959 ರ ನವೆಂಬರ್ ನಲ್ಲಿ ಲುಫ್ತಾನ್ಸಾ ಭಾರತಕ್ಕೆ ತನ್ನ ಮೊದಲ ವಾಣಿಜ್ಯ ಸೇವೆಯನ್ನು ಲಾಕ್ ಹೀಡ್ ಸೂಪರ್ ಕಾನ್ ಸ್ಟೆಲೇಶನ್ ವಿಮಾನವನ್ನು ಕೊಲ್ಕತ್ತಾಗೆ ಕಳುಹಿಸುವ ಮೂಲಕ ಆರಂಭಿಸಿತು. ಅಲ್ಲಿಂದ, ಭಾರತದೊಂದಿಗೆ ಲುಫ್ತಾನ್ಸಾದ ಪಾಲುದಾರಿಕೆ ಪ್ರತೀ ವರ್ಷ ದೃಢವಾಗಿ ಬೆಳೆಯುತ್ತಿದೆ. ಈ ವರ್ಷಗಳಲ್ಲಿ, ಭಾರತದಿಂದ ಮತ್ತು ಭಾರತಕ್ಕೆ ಫ್ರಾಂಕ್ ಫರ್ಟ್ ಮತ್ತು ಮ್ಯೂನಿಕ್ ನಿಂದ ಭಾರತದ 5 ಮುಖ್ಯಸ್ಥಳಗಳಾದ –ದೆಹಲಿ, ಮುಬೈ, ಬೆಂಗಳೂರು, ಚೆನ್ನೈ ಮತ್ತು ಪುಣೆಗೆ ಹಾರುವ ವಿಮಾನಗಳ ಸಂಖ್ಯೆ ಹಾರುವ ವಿಮಾನಗಳ ಸಂಖ್ಯೆ ಪ್ರತೀ ವಾರ 46 ಕ್ಕೇರಿದೆ. ಇದರೊಂದಿಗೆ, ಲುಫ್ತಾನ್ಸಾ ಗ್ರೂಪ್ ಏರ್ ಲೈನ್ಸ್ ಭಾರತದಲ್ಲಿನ 5 ಪ್ರಮುಖ ಮಾರ್ಗಗಳಿಗೆ ವಾರಕ್ಕೆ 66 ವಿಮಾನಗಳನ್ನು 4 ಜಾಗತಿಕ ವಲಯಗಳಿಂದ ನೀಡುವ ಮೂಲಕ ಇದು ಭಾರದಲ್ಲಿನ ನಂ.1 ಯೂರೋಪಿಯನ್ ಏರ್ ಲೈನ್ ಸಮೂಹವಾಗಿದೆ.

ನಿಮಗೆ ಗೊತ್ತೇ?

ಭಾರತ ’ಆಕಾಶದ ರಾಣಿ’ಯಾದ ಲುಫ್ತಾನ್ಸಾ ಬೋಯಿಂಗ್ 747-8 ಅನ್ನು ಸ್ವಾಗತಿಸಿದ ಏಷ್ಯಾದಲ್ಲಿ ಮೊದಲ ಹಾಗೂ ವಿಶ್ವದಲ್ಲಿ ಎರಡನೆಯ ದೇಶವಾಗಿದೆ.

View More

ಭಾರತದಲ್ಲಿ ಲುಫ್ತಾನ್ಸಾದ ಇತಿಹಾಸ

Lufthansa history

ಕಳೆದ ಅರ್ಧ ಶತಮಾನದಿಂದ, ಲುಫ್ತಾನ್ಸಾ ಭಾರತದೊಂದಿಗೆ ವಿಶ್ವಾಸ ಮತ್ತು ಬದ್ಧತೆಯ ಆಧಾರದ ಮೇಲೆ ಸದೃಢ ಪಾಲುದಾರಿಕೆಯನ್ನು ಹೊಂದಿದೆ. ಲುಫ್ತಾನ್ಸಾ ಜಂಕರ್ಸ್ JU 52 ವಿಮಾನ ರಾಜಸ್ಥಾನದ ಚಿನ್ನದ ಮರಳುಗಳ ನಡುವಿನ ಜೋಧಪುರದಲ್ಲಿ ಇಳಿಯುವ ಮೂಲಕ 1934 ರಲ್ಲಿ ಸ್ಮರಣೀಯ ಪ್ರಯಾಣ ಆರಂಭವಾಯಿತು. ಆದರೆ, ಈ ಪ್ರಥಮ ಲುಫ್ತಾನ್ಸಾ ಲಾಕ್ ಹೀಡ್ L1049G ಸೂಪರ್ ಕಾನ್ ಸ್ಟಲೇಶನ್ ಕಲ್ಕತ್ತಾದಲ್ಲಿ (ಈಗಿನ ಕೊಲ್ಕತ್ತಾ) ಭಾರತಕ್ಕೆ ಲುಫ್ತಾನ್ಸಾದ ನಿಗದಿತ ವಿಮಾನಗಳ ಸಂಕೇತವಾಗಿ ಇಳಿಯುವ ಮೂಲಕ 1959 ರಲ್ಲಿ ಔಪಚಾರಿಕ ಸಂಬಂಧವಾಗಿ ಮಾರ್ಪಾಡಾಯಿತು. ಅಲ್ಲಿಂದ, ಲುಫ್ತಾನ್ಸಾ ವಿಮಾನಯಾನದ ಏರಿಳಿತಗಳ ಮೂಲಕ ಭಾರತದಲ್ಲಿ ಸದೃಢವಾಗಿ ನೆಲೆಯೂರಿದೆ.

ವಿಮಾನಗಳು ಮತ್ತು ಉದ್ದೇಶಿತ ಸ್ಥಳಗಳ ಸಂಖ್ಯೆ ಹೆಚ್ಚುತ್ತಿರುವುದರ ಹೊರತಾಗಿಯೂ, ಲುಫ್ತಾನ್ಸಾ ಭಾರತೀಯ ಗ್ರಾಹಕರ ಅಗತ್ಯಗಳನ್ನು ಗೌರವಿಸುವ ತನ್ನ ಸೇವೆಯನ್ನು ವ್ಯವಸ್ಥಿತಗೊಳಿಸಲು ಈ ಪಾಲುದಾರಿಕೆಗೆ ಸೇರಿಸಿದೆ. ಈ ಹಾದಿಯಲ್ಲಿನ ಮೈಲುಗಲ್ಲುಗಳು ಭಾರತೀಯ ಕ್ಯಾಬಿನ್ ಸಿಬ್ಬಂದಿ, ಭಾರತೀಯ ಸಂಗೀತ, ಬಾಲಿವುಡ್ ಚಿತ್ರಗಳು ಮತ್ತು ಭಾರತೀಯ ಅಡಿಗೆಗಳ ಸಂಗಮಗಳನ್ನು ಪರಿಚಯಿಸುವುದನ್ನು ಒಳಗೊಂಡಿದೆ.

1934

ಲುಫ್ತಾನ್ಸಾ ಜೋಧಪುರದಲ್ಲಿ ಇಳಿಯುವ ಮೂಲಕ, ಭಾರತಕ್ಕೆ ಪ್ರಥಮ ಬಾರಿ ವಿಮಾನ ಪ್ರಯಾಣ ಆರಂಭಿಸಿತು.

1959

ಲುಫ್ತಾನ್ಸಾ ಭಾರತದಲ್ಲಿ ಕೊಲ್ಕತ್ತಾಗೆ ತನ್ನ ಪ್ರಥಮ ನಿಗದಿತ ಕಾರ್ಯವನ್ನು ಆರಂಭಿಸಿತು.

1987

ಲುಫ್ತಾನ್ಸಾದ ವಿಮಾನದೊಳಗಿನ ಮನರಂಜನಾ ಕಾರ್ಯಕ್ರಮವಾಗಿ ಭಾರತೀಯ ಸಂಗೀತವನ್ನು ಪರಿಚಯಿಸಿತು.

1996

ಭಾರತೀಯ ಕ್ಯಾಬಿನ್ ಸಿಬ್ಬಂದಿಗಳನ್ನು ಭಾರತದ ಮಾರ್ಗಗಳಿಗೆ ಪರಿಚಯಿಸಿತು

2004

ನವದೆಹಲಿಯಿಂದ ವಿಮಾನದಲ್ಲಿ ಫ್ರಾಂಕ್ ಫರ್ಟ್ ಗೆ ಸೇವೆ ನೀಡುವ ಮೂಲಕ ಜರ್ಮನಿಯಲ್ಲಿನ ಮ್ಯೂನಿಚ್ ಲುಫ್ತಾನ್ಸಾದ ಎರಡನೆಯ ಗಮ್ಯಸ್ಥಳವಾಯಿತು.

2009

ಲುಫ್ತಾನ್ಸಾ ಸಿ ಎನ್ ಬಿ ಸಿ ಆವಾಜ್ ಪ್ರಯಾಣ ಪ್ರಶಸ್ತಿಯಲ್ಲಿ “ಭಾರತದಲ್ಲಿನ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನಯಾನ” ಎಂದು ಆಯ್ಕೆಯಾಯಿತು.

2011

ಲುಫ್ತಾನ್ಸಾ ಔಟ್ ಲುಕ್ ಟ್ರಾವೆಲರ್ ನಿಂದ “ಫೇವರಿಟ್ ಅಂತಾರಾಷ್ಟ್ರೀಯ ವಿಮಾನಯಾನ” ಎಂದು ಪ್ರಶಸ್ತಿ ಗಳಿಸಿತು.

2012

ಲುಫ್ತಾನ್ಸಾ ಲೌಂಜ್ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತೆರೆಯಿತು

2012

ಲುಫ್ತಾನ್ಸಾ ತನ್ನ ಹೊಸ ಬೋಯಿಂಗ್ 747-8 ವಿಮಾನವನ್ನು ದೆಹಲಿ-ಫ್ರಾಂಕ್ ಫರ್ಟ್ ಮತ್ತು ಬೆಂಗಳೂರು-ಫ್ರಾಂಕ್ ಫರ್ಟ್ ಗೆ ಆರಂಭಿಸಿ, ಭಾರತವನ್ನು ಹೊಸ ವಿಮಾನ ಸ್ವೀಕರಿಸಿದ ಮೊದಲ ಏಷ್ಯನ್ ದೇಶ ಮತ್ತು ಹೊಸ ಪೂರ್ಣ-ಫ್ಲ್ಯಾಟ್ ಬಿಸಿನೆಸ್ ವರ್ಗದ ಆಸನಗಳನ್ನು ಹೊಂದಿದ ದೇಶವನ್ನಾಗಿಸಿತು.

2014

ಲುಫ್ತಾನ್ಸಾ ಇಂಡಿಯಾ ಆಂದೋಲನ 4 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ನೇರ ಮಾರುಕಟ್ಟೆ ಸಹಯೋಗದ ಅಂತಾರಾಷ್ಟ್ರೀಯ ಇ ಸಿ ಹೆಚ್ ಓ ಪ್ರಶಸ್ತಿಗಳನ್ನು ಗೆದ್ದಿದೆ. ಲುಫ್ತಾನ್ಸಾ ಗೆದ್ದಿದೆ ವರ್ಷದ ಏರ್ ಲೈನ್ಸ್ ಪ್ರಶಸ್ತಿ - ಯುರೋಪ್ ಮತ್ತು ಉತ್ತರ ಅಮೇರಿಕಾಗಳಲ್ಲಿ ಸತತವಾಗಿ 3 ಬಾರಿ GMR-IGI ಪ್ರಶಸ್ತಿಗಳನ್ನು ಗೆದ್ದಿದೆ.

50 ಕ್ಕೂ ಅಧಿಕ ವರ್ಷಗಳ ವಿಶ್ವಾಸ ಮತ್ತು ಬದ್ಧತೆ

Testimonial banner

ಕಳೆದ ಅರ್ಧ ಶತಮಾನಗಳಿಂದ ಭಾರತವನ್ನು ’ಭಾರತೀಕರಣ’ಗೊಳಿಸುವ ನಮ್ಮ ಭಾರತೆಡೆಗಿನ ಬದ್ಧತೆ ಮತ್ತು ಪ್ರಯತ್ನ ನಮ್ಮ ಗ್ರಾಹಕರು, ನಮ್ಮ ಪಾಲುದಾರರು, ಹಾಗೂ ಎಲ್ಲಾ ಭಾರತೀಯ ಪ್ರಯಾಣಿಕರ ನಿರಂತರ ಪ್ರಶಂಸೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ, ನಾವು ಕೇವಲ ಅಂತಾರಾಷ್ಟ್ರೀಯ ಪ್ರಯಾಣ ಉದ್ದಿಮೆಯಲ್ಲಷ್ಟೇ ಅಲ್ಲದೇ, ಭಾರತೀಯ ಪ್ರಯಾಣ ವಲಯದಲ್ಲಿಯೂ ವಿಶೇಷವಾಗಿ ಪ್ರಶಸ್ತಿಗಳಿಂದ ಗೌರವಿಸಲ್ಪಡುತ್ತಿದ್ದೇವೆ.

ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ: ಸಿ ಎನ್ ಬಿ ಸಿ ಆವಾಜ್ ಟ್ರಾವೆಲ್ ಅವಾರ್ಡ್ಸ್ ನಲ್ಲಿ ಭಾರತದಲ್ಲಿನ ಉತ್ತಮ ಅಂತಾರಾಷ್ಟ್ರೀಯ ವಿಮಾನಯಾನ ಪ್ರಶಸ್ತಿ, ಔಟ್ ಲುಕ್ ಟ್ರಾವೆಲರ್ ನಿಂದ ಅತ್ಯಂತ ಮೆಚ್ಚಿನ ಅಂತಾರಾಷ್ಟ್ರೀಯ ವಿಮಾನಯಾನ ಮತ್ತು ಯೂರೋಪ್ ನಲ್ಲಿನ 1 ನೆಯ ವಾರ್ಷಿಕ ಜಿಎಂಆರ್-ಐಜಿಐ ಏರ್ ಪೋರ್ಯ್ ಪ್ರಶಸ್ತಿಗಳಲ್ಲಿ-ವರ್ಷದ ವಿಮಾನಯಾನ ಲಭ್ಯವಾಗಿದ್ದು, ನಮ್ಮನ್ನು ಭಾರತದಲ್ಲಿನ ನಂ 1 ಯೂರೋಪಿಯನ್ ವಿಮಾನಯಾನವನ್ನಾಗಿಸಿದೆ. ಆದರೆ ಈ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಾಗಿ, ಗ್ರಾಹಕರ ಮಾತು ನಮ್ಮ ಪ್ರತೀ ದಿನವನ್ನು ನಿಮಗೆ ಮನೆಯಿಂದ ದೂರವಾದ ಮನೆಯನ್ನು, ಮೋಡಗಳ ಮೇಲೆ ನೀಡಲು ಹೆಚ್ಚು ಉತ್ತಮವಾಗಿ ಪ್ರಯತ್ನಿಸಲು ಪ್ರೋತ್ಸಾಹಿಸುತ್ತಿದೆ!

View More

ಭಾರತದಲ್ಲಿ ಲುಫ್ತಾನ್ಸಾ ಚಟುವಟಿಕೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ

ದೀಪಾವಳಿ ಹಬ್ಬವನ್ನು ಆಚರಿಸುವುದರಿಂದ ಪ್ರಾರಂಭಿಸಿ ಭಾರತದ ಭವ್ಯವಾದ ಐತಿಹಾಸಿಕ ಪರಂಪರೆಯನ್ನು ಉದಯೋನ್ಮುಖ ಉದ್ಯಮಗಳಿಗೆ ಪರಿಚಯಿಸುತ್ತಿರುವ ಲುಫ್ತಾನ್ಸಾ ಇಂಡಿಯಾದ ಇತ್ತೀಚಿನ ಪ್ರಚಾರಗಳು ಭಾರತದ ನೈಜ ಸ್ಪೂರ್ತಿಯನ್ನು ಪ್ರತಿಬಿಂಬಿಸಿದೆ. ಈ ಪ್ರಚಾರಗಳನ್ನು ಭಾರತದಲ್ಲಿರುವ ಲುಫ್ತಾನ್ಸಾ ತಯಾರಿಸಿದೆ ಹಾಗೂ ಇದನ್ನು ಭಾರತದಾದ್ಯಂತ ಮಾತ್ರವಲ್ಲದೆ, ಲುಫ್ತಾನ್ಸಾ ಹಾರಾಡುತ್ತಿರುವ ವ್ಯಾಪಕ ನೆಟ್ ವರ್ಕ್ ದೇಶಗಳಲ್ಲೂ ಹಬ್ಬಿಸಲಾಗಿದೆ. ಈ ಪ್ರಚಾರ ಆಂಧೋಲನಕ್ಕಾಗಿ ಭಾರತ ಮತ್ತು ಜಗತ್ತಿನ ಅನೇಕ ದೇಶಗಳಲ್ಲಿ ನೂರಾರು ಮತ್ತು ಸಾವಿರಾರು ಜನರು ಭಾಗವಹಿಸಿದ್ದರು.

ಲುಫ್ತಾನ್ಸಾ ನಿಜವಾಗಿಯೂ “ನೀವು ಯೋಚಿದ್ದಕ್ಕಿಂತಲೂ ಹೆಚ್ಚು ಇಂಡಿಯನ್” ಎಂಬುದನ್ನು ಖಚಿತಪಡಿಸುವುದಕ್ಕಾಗಿ ಇಲ್ಲಿ ನಿಮಗಾಗಿ ಕೆಲವೊಂದು ಪಕ್ಷಿನೋಟಗಳನ್ನು ಸಾದರಪಡಿಸುತ್ತಿದ್ದೇವೆ.

View More